Myself..not much to tell about! I'm someone who'd like to be simple with complex thoughts! Paradoxes have always fancied me...and so is my blog name too..!
Thursday, July 30, 2009
ಮತ್ತೊಂದು ಹಬ್ಬ !
ಅದೇನೋ ಗೊತ್ತಿಲ್ಲ. ಈ ಹಬ್ಬಗಳು ಬಂದರೆ ನನಗೆ ಒಂಥರಾ ಕುತೂಹಲ. ಈಗ ನಾವು ಆಚರಿಸೋ ರೀತಿ ಹಬ್ಬಗಳ ಮಹತ್ವವನ್ನೇ ಮೂಲೆಗುಂಪು ಮಾಡಿದೆ ಅನ್ನಿಸುತ್ತೆ. ನಮ್ಮ ಯಾವುದೇ ಆಚರಣೆಗೂ ಅದರದೇ ಆದ ಅರ್ಥ ಇದೆ. ಆದರೆ ಈಗ ಕೇವಲ ಆಡಂಬರ ಬಿಟ್ಟರೆ ಬೇರೆ ಏನು ಕಾಣ ಸಿಗೋಲ್ಲ... ಸಿಕ್ಕರೂ, ಎಷ್ಟು ಅಪರೂಪ ಅಂದರೆ ಟಿವಿಯಲ್ಲಿ ಪ್ರಸಾರ ಆಗೋ ಅಷ್ಟು! ನಾನು ಯಾಕೆ ಈ ಬಗ್ಗೆ ಬರೀತಾ ಇದ್ದೀನಿ ಅಂದ್ರೆ, ನಾಳೆ ವರಮಹಾಲಕ್ಷ್ಮಿ ಹಬ್ಬ. ನನಗೆ ನಿಜವಾಗಲು ಈ ಹಬ್ಬದ ಹಿಂದಿನ ಪೌರಾಣಿಕ ಕಾರಣ ಗೊತ್ತಿಲ್ಲ. ಎಷ್ಟೋ ಸರಿ ತಿಳ್ಕೋ ಬೇಕು ಅಂತ ಪ್ರಯತ್ನ ಮಾಡಿದ್ರು ಗೊತ್ತಾಗ್ಲಿಲ್ಲ. :( ಆದ್ದರಿಂದ, ಇದನ್ನ ಓದ್ತಾ ಇರೋರ್ಗೆ ಯಾರ್ಗಾದ್ರು ಅದರ ಬಗ್ಗೆ ಗೊತ್ತಿದ್ರೆ ಪ್ಲೀಸ್ ತಿಳಿಸಿ. ಓಕೆ.. ಈಗ ವಿಷಯಕ್ಕೆ ಬರೋಣ. ಬೇರೆ ಎಲ್ಲ ಹಬ್ಬಗಳಿಗಿಂತ ಈ ಹಬ್ಬ ಸಿಟಿಗಳಲ್ಲಿ ತುಂಬ ಜೋರು. ಮುಖ್ಯವಾದ ಕಾರಣ ಅಂದ್ರೆ, ಮನೆಯಲ್ಲಿರೋ ಒಡವೆ ಎಲ್ಲ ಬೇರೆಯವರಿಗೆ ತೋರಿಸಲು ಒಳ್ಳೆ ಚಾನ್ಸ್! ನಾನು ನಮ್ಮಮ್ಮನ ಜೊತೆ ಕೆಲವರ ಮನೆಗೆ ಕುಂಕುಮಕ್ಕೆ ಅಂತ ಹೋಗ್ತೀನಿ. ಎಷ್ಟೊಂದು ಒಡವೆ ಹಾಕಿರ್ತಾರೆ ಅಂದ್ರೆ , ನನಗೆ ಒಂದೊಂದ್ಸಾರಿ , ಈ ಟೈಮಲ್ಲಿ ಕಳ್ಳ ಏನಾದ್ರು ಮನೆಗೆ ಬಂದ್ರೆ ಏನು ಗತಿ ಅಂಥ ಅನ್ನಿಸುತ್ತೆ! ಹಾಗೇನೇ, ಅಲ್ಲಿ ಕುಂಕುಮಕ್ಕೆ ಬರುವವರ ಪೈಕಿ ಎಷ್ಟು ಜನ ಭಕ್ತಿಯಿಂದ ಬರ್ತಾರೋ ಗೊತ್ತಿಲ್ಲ. ಆದ್ರೆ ಅಲ್ಲಿ ದೇವರ ಗುನಗಾನಕ್ಕಿಂತ ಒಡವೆಗಳ ಬಗ್ಗೆ ಮಾತೊಡೋದೇ ಜಾಸ್ತಿ ಕೇಳ್ಸುತ್ತೆ. ನನಗಂತೂ ಒಳ್ಳೆ ಅನುಭವ :) ಆದ್ರೆ ಒಂದು ಕಡೆ , ಈ ಎಲ್ಲದರ ಉದ್ದೇಶವಾದರು ಏನು ಅಂತ ಒಂದು ಪ್ರಶ್ನೆ! ಏನು ಮಾಡೋದು, ಹುಟ್ಟು ಗುಣ, ನಾನು ಬೇಡ ಅಂದ್ರು ಪ್ರಶ್ನೆಗಳು ನನ್ನನ್ನ ಬಿಡೋಲ್ಲ ;) ಅದು ಏನೇ ಇರಲಿ, ಎಲ್ಲರಿಗು, ಹಬ್ಬದ ಶುಭಾಶಯಗಳು.
Subscribe to:
Post Comments (Atom)
ನೀನ್ ಕೆಳಿದ್ ಪ್ರಶ್ನೆಗೆ ಉತ್ತರ ಅಂತು ನನಗೆ ಗೊತಿಲ್ಲ...
ReplyDeleteಆದರೆ ಹಬ್ಬಗಳು ನನಂಥವರಿಗೆ latest trends ತಿಳ್ತೊಳಕ್ಕೆ ಅಂತು help ಮಾಡತ್ತೆ.. in fact ಹೂದ ಗೊಕುಲಾಶ್ಟಮಿನಲ್ಲಿ I got to know about this step cut.. till then I used to wonder ಈ ಜಿಂಗ್-ಚಕ್ ಹುಡ್ಗಿರ್ ಕೂದಲೆಲ್ಲ ಎಣ್ಣೇ ಹಚ್ದೆನೆ ಎಶ್ಟ್ neat ಆಗಿ ಕುತ್ಕೊಳತ್ತ್ ಅಲ್ಲ, ಅದ್ ಹೇಗೆ ಅಂತ.!!
ha ha..how did u come to know about 'step cut' in gokulashtami??!!
ReplyDeletewel my super traditional cousin(aka 'mami') told me!! some gals dressed in THE best(worst) possible way with latest accessories, all mounted on their fragile body had come home tat day.. aaga ee complicated vishya ella introduce aagiddu!
ReplyDeleteHmm.. antu hosa vishayagalu gottaytu..that's good!
ReplyDelete