Wednesday, January 7, 2009

ದೇವರು ಮತ್ತು ನಾವು...

ಟೈಟಲ್ ನೋಡ್ತಾನೆ ಫಿಲಾಸಫಿ ಅಂತ ಅಂದ್ಕೋಬೇಡಿ. ನನಗಿನ್ನು ಚಿಕ್ಕ ವಯಸ್ಸು. ಇಷ್ಟು ಬೇಗ ವೈರಾಗ್ಯ ಬಂದಿಲ್ಲ. :)
ಮೊನ್ನೆ, ನಾನು ಅಪ್ಪ ಮತ್ತೆ ಅಮ್ಮನ ಜೊತೆ ದೇವಸ್ಥಾನಕ್ಕೆ ಹೋಗಿದ್ದೆ. ಹೋಗೋ ಮುನ್ನ, ಅಮ್ಮ ತಮ್ಮನನ್ನ ಕೂಡ ಬರೋಕೆ ಹೇಳಿದ್ರು. ಅವನೋ ತುಂಬ ಬ್ಯುಸಿ. ಈಗ ತಾನೆ ಕಾಲೇಜ್ಗೆ ಸೇರಿದ್ದಾನೆ. ಕಾಲೇಜ್, ಟ್ಯೂಷನ್, ಫ್ರೆಂಡ್ಸ್, ಇಷ್ಟರಲ್ಲೇ ಆಗತ್ತೆ ಅವ್ನ ದಿನ ಎಲ್ಲ. ಅದಕ್ಕೆ ನಮ್ಮ ಜೊತೆ ಬರೋಕೆ ಹೇಳಿದ್ರು . ಅದಕ್ಕೆ ಅವ್ನು, ' ನಾನು ಇಲ್ಲೇ ಇರೋ ದೇವಸ್ಥಾನಕ್ಕೆ ಹೋಗ್ತೀನಿ, ಟ್ಯೂಷನ್ ಹೋಗುತ್ತೆ, ಬರೋಕೆ ಆಗೋಲ್ಲ ಅಂದ. ದೇವ್ರು ಎಲ್ಲಿದ್ರು ಒಂದೇ ' ಅಂತ ಅಂದ.. ಆಗ ನನಗು ಅನ್ನಿಸ್ತು, ಹೌದು ದೇವ್ರು ಎಲ್ಲಿ ಇದ್ದರು ಒಂದೇ. ಮತ್ತೆ ಇಷ್ಟೊಂದು ದೇವಸ್ಥಾನಗಳು ಯಾಕೆ?? ರೋಡ್ , ರೋಡಲ್ಲಿ, ಕ್ರಾಸ್ಗಳಲ್ಲಿ, ಎಲ್ಲಿ ನೋಡಿದ್ರು ದೇವಸ್ಥಾನಗಳು..!

ಇನ್ನು, ದೇವಸ್ಥನದಲ್ಲೋ, ನಾನ ರೀತಿಯ ಜನ. "ದೇವಸ್ಥಾನದ ಆವರಣವನ್ನು ಸ್ವಚ್ಚವಾಗಿ ಇಡಿ" ಈ ಸೂಚನೆ ಅಲ್ಲಲ್ಲಿ ಇದ್ದರು, ಜನ ಮಾತ್ರ ಅದನ್ನ ಪಾಲಿಸೋಲ್ಲ. ಎಲ್ಲರಿಗು ಅವ್ರು ಮಾಡಿದ್ದೆ ಸರಿ. ದೇವಸ್ಥಾನದಲ್ಲೇ ಅಂತ ಅಲ್ಲ. ಎಲ್ಲಿ ಆದರು ಅಷ್ಟೆ. ನಿಯಮ ಪಾಲಿಸೋರು ಮಾತ್ರ ಬೆರಳೆಣಿಕೆ ಅಷ್ಟು ಜನ. ಅದೂ, ಬೇರೆಯವರ ವ್ಯಂಗ್ಯದ ಮಧ್ಯೆ! ಇನ್ನು, ಮಕ್ಕಳು ಅಲ್ಲಿ ಇದ್ದರೆ, ಅವ್ರಿಗೆ ಕನ್ಫ್ಯೂಸ್ ಆಗ್ಬೇಕು, ಯಾವುದು ಸರಿ ಯಾವುದು ತಪ್ಪು ಅಂತ!

ಹಿಂದೆ ಎಲ್ಲಾ, ಋಷಿ ಮುನಿಗಳು, ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ದೇವರ ದರ್ಶನ ಮಾಡ್ತಿದ್ರು ಅಂತ ನಮ್ಮ ಪುರಾಣಗಳು ಹೇಳುತ್ವೆ. ಈವಾಗ, ನಮಗೆ, ಕ್ಯು ನಲ್ಲಿ ನಿಂತು ದೇವರ ದರ್ಶನ ಮಾಡೋ ತಾಳ್ಮೆ ಕೂಡ ಇಲ್ಲ. ಇನ್ನು ಕೆಲವು ಕಡೆ, ಕೆಲವರು ಕ್ಯು ಮಧ್ಯದಲ್ಲೇ ಸೇರೋ ಪ್ರಯತ್ನ ಮಾಡ್ತಾರೆ. ಅಷ್ಟು ಆದ ಮೇಲೆ, ಜಗಳ ಆಗದೆ ಇರುತ್ತಾ? ದೇವಸ್ಥಾನದಲ್ಲೂ ಜಗಳ. ಇಷ್ಟಕ್ಕೂ, ನಾವು ದೇವಸ್ಥಾನಕ್ಕೆ ಯಾಕೆ ಹೋಗ್ತೇವೆ?? ದೇವರನ್ನ ಮೆಚ್ಚಿಸೋಕ? ಅಥವಾ ನಮ್ಮ ಮನಶಾಂತಿಗೋ? ಎಲ್ಲರು ಹೋಗೋದು, ದೇವ್ರು ನಮಗೆ ಒಳ್ಳೇದು ಮಾಡ್ಲಿ ಅಂತ. ನಮ್ಮ ಇಷ್ಟಗಳನ್ನ ನೆರವೇರಿಸಲಿ ಅಂತ. ಎಲ್ಲರು ಸ್ವಾರ್ಥಿಗಳೇ! ಯಾರಾದ್ರೂ, ಎಲ್ಲರಿಗು ಒಳ್ಳೆಯದಾಗಲಿ ಅಂತ ಬೇಡ್ತಾರ?? ಅಥವಾ ಕೆಲವರು ಇದ್ದರು ಇರಬಹುದು. ತುಂಬಾ ಕಡಿಮೆ!... ಹೀಗಿರುವಾಗ, ಸ್ವಲ್ಪ ತಾಳ್ಮೆ ನಾದ್ರೂ ಇರಬೇಕಲ್ವ?
ದರ್ಶನ ಮಾಡಿ ಹೊರಗೆ ಬರುವ ಹೊತ್ತಿಗೆ, ಈ ಪ್ರಶ್ನೆಗಳು ನನ್ನನ್ನ ಆವರಿಸಿದವು.... ಮಾಮೂಲಿನ ಹಾಗೆ, ಉತ್ತರ ಮಾತ್ರ, ಇನ್ನು ಸಿಗಲಿಲ್ಲ...:)

2 comments:

  1. en maja bant gotta ee post odi.. these're the same stupid que along with a few like manga_larati yaak innu maadtaare when all kind of color-color spot light are put on tat helpless devru..(previously the garbhagudi was very dark.., to show the idol haag maadtidru anta manenal kaltidde.. eega roadnalle biddirtaane nam aanjaneya papa)

    PS--got ur link from nachi's blog.. coincidence anta andkotini.. ivatt tane neen nan blog bagge hel shock kotte.. and by night I'm on ur blog..!

    ReplyDelete
  2. LOL.. correct! There is a reason behind every tradition, ritual.. But now, we just hold on to it without knowing why.... And that becomes a blind belief.. Anyways, thanks for the comment :)

    ReplyDelete